prashanth_uc: ನೋಡಲು ಎರಡು ಕಣ್ಣುಗಳಿರಲು, ನೆನಪಿಡಲು ಮೆದುಳೆಂಬ ಅಂಗವೇ ಇರಲು, ಕಂಡದ್ದನ್ನು ಕಂಡಾಗ ಆನಂದಿಸುವ ಬದಲು, ಫೋಟೋ ತೆಗೆದು ಫೇಸ್ಬುಕ್ ಲೈಕ್ ಗೆ ಕಾಯುವ ನಮಗೆ ಬಂದಿದೆ ಈಗ Fatwa ! Fatwa !! Fatwa !!!
prashanth_uc: ಶಾಸ್ತ್ರ ಸಂಸ್ಕಾರ ನೀತಿ ವಿಚಾರ, ಇವೆಲ್ಲ ಇದ್ದರು ಇಲ್ಲ ನಮಗೆ ಆಚಾರ, ಹೂವಿಂದ ಹೊವಿಗೆ ಹಾರುವ ಪಾತರಗಿತ್ತಿಗೆ, ಹೇರಿದರೆ ನಮ್ಮ ಶಾಸ್ತ್ರ ಸಂಸ್ಕಾರ ನೀತಿ ವಿಚಾರ, ಅದು ಮಾಡುವುದು ಆಗುವುದೇ ಅನಾಚಾರ ?
prashanth_uc: ದುಡಿದು ಸುರಿಯುವ ಬೆವರು ಒಂದೆ, ಬೆಳೆದ ಬೆಳೆಯು ಸೇರುವ ಅಡುಗೆ ಕೋಣೆ ಒಂದೆ, ನಮ್ಮಿಬ್ಬರ ನೆಮ್ಮದಿಗೆ ಇರುವ ಮನೆಯು ಒಂದೆ, ಗಂಡು ಹೆಣ್ಣು ನಾವು ನಡೆಯುವ ದಿಕ್ಕು ಬೇರೆ ಇರಲು, ಸಾಗುವುದೇ ನಮ್ಮ ಸಂಸಾರ ಮುಂದೆ ಮುಂದೆ ?!
prashanth_uc: ಮಾತು ಕತೆ ಇದು ಮಾತು ಕತೆ, ಆಗುವುದು ಇದು ಬೇರೆ ಬೇರೆಯವರ ಜೊತೆ, ಮಾತು ಬರದಿಹ ರಸ್ತೆ ಗಾಡಿಗಳು ಅನಿಸಿಕೆ ಹಂಚಿಕೊಳ್ಳುವುದು ಯಾರ ಜೊತೆ ?
prashanth_uc: ಊರನು ಬಿಟ್ಟು ಕಾಡಿಗೆ ಹೋಗಿ, ಹಸಿರು ಬಟ್ಟೆಯ ತೊಟ್ಟು , ಚಾಪೆಯ ಸುತ್ತಿ , ಕುಟಿರ ಸೇರಿ, ರಾತ್ರಿಯ ಕಳೆದು , ಕಾಡನು ಅಲೆದು, ಪ್ರಾಣಿಗಳ ಅಳೆದು, ಬಂದರೂ ಬರಬಹುದು ನಮಗೆ ಪುಣ್ಯ ಫಲ !
prashanth_uc: ಕಟ್ಟಿಗೆಯ ಓಲೆಇಂದ ಮಸಿಯಾದರೇನು, ಅನ್ನದ ಅಗುಳು ತುಸು ಗಟ್ಟಿಯದರೇನು, ತುಂಬು ಹೃದಯದಿಂದ ಬಡಿಸಿದ ಊಟ ಎಲ್ಲಿ ಬಡಿಸಿದರೇನು , ಆ ಆನಂದವೇನು !
prashanth_uc: ಕಾಡಲಿ ನಾವು ಕಾಟಿ ಯ ಕಣ್ಣಿಗೆ ಕಂಡಾಗ, ಕೊಡುವುದು ಒಂದು ಕುತೂಹಲದ ನೋಟ, ನಾಡಿನಲ್ಲಿ ನಮಗೆ ಕಾಟಿ ಕಂಡಾಗ, ಮಾಡುವೆವು ನಾವು ಒಂದು ನಾಗಾಲೋಟ, ಕಾಡು ಕಾಟಿಗೆ ; ನಾಡು ನಮಗೆ !
prashanth_uc: ಯಾರೇ ಸೇಮ್ ಅನ್ನಲಿ, ಎಲ್ಲಾ ರಿಪೀಟ್ ಅಂದ್ ಕೊಳ್ಳಲಿ , ಸೂರ್ಯ ನಿನಗೆ ಸಾಟಿ ಇಲ್ಲ, ಫೋಟೋ ತೆಗೆವ ನಮಗೆ ಬೋರು ಇಲ್ಲ, ನೋಡೋ ನಿಮಗೆ ನಮ್ಮ ಥ್ಯಾಂಕ್ಸ್ ಎಲ್ಲಾ, ಅರೆ ಹೊಐ ಹೊಐ ಟರ್ರ್ ಆಅ !!!
prashanth_uc: ಆಕಾಶ ಭೂಮಿಯ ಮದ್ಯೆ ಗೆರೆ ಯೆಳದವರು ಯಾರು ? ಕಾಡು ನಾಡಿನ ಮದ್ಯೆ ಗೆರೆ ಯೆಳದರು ಯಾಕೆ ? ಮನುಜ ಪ್ರಾಣಿಗಿಂತ ಘೋರವಾದಾಗ ಬೇಲಿ ಗುಂಡಿಗಳ ಗಡಿ ತರುವುದೇ ನಮ್ಮ ಮದ್ಯೆ ಅಂತರ ?
prashanth_uc: ಮಸಿ-ಅರಿವೆ ನಾನು, ಸ್ವಚ್ಛ ಇಡುವೆ ಮನೆಯ ನಿಮ್ಮ ಜೊತೆ ನಾನು, ನನಗೆ ಜಾಗವೇಕೆ ಬೇರೆ, ಆರಿಸುವಾಗ ನನ್ನ ನೀವು ? ಮೇಲು ಕೀಳು ಬೇಕೇ ? ನಿಮ್ಮೊದಿಗೆ ಇರುವೆ ನಾನು .
prashanth_uc: ಪರಾಗ ಸ್ಪರ್ಶವ ಮಾಡಿ, ಪೋಲಿನೇಶನ್ ಪ್ರಸಿದ್ದಿ ಪಡೆದಿರುವೆ, ಮತವನ್ನು ಹಾಕಿ ವೊಟರ ಚೀಟಿ ಪಡೆದಿರುವ ನೀವು, ರಸವನ್ನು ಹೀರಿ ಮಧು ತಯಾರಿಸಿದ ಹೆಮ್ಮೆ ನಮ್ಮದು, ಮಧ್ಯವ ಕುಡಿದು ಕಟ್ಟಿದ ದೇಶ ನಿಮ್ಮ್ಮದು, ಇದೆಯೇ ನನ್ನ ಮದುವಂತೆ ಸಿಹಿ ನಿಮ್ಮ ದೇಶ ?
prashanth_uc: ಮೊಟ್ಟೆಯಿಂದ ಹೊರಗೆ ಬಂದು, ಎಲೆಯನ್ನು ಹೊಟ್ಟೆತುಂಬ ತಿಂದು, ನಿದ್ದೆಯಲ್ಲೇ ರೆಕ್ಕೆ ಬಂದು, ಒಂದೇ ವಾರ ಜೀವ ಕಳೆವ ನಮಗೆ, ಹೂವೇ ಬಳಗ ಹೂವೇ ಬಂದು
prashanth_uc: ಕಾಡಲ್ಲಿ ಅಲೆವ ನಮಗೆ ಜೀವ ರಕ್ಷಣೆ ಗೆ ಶೂಟಿಂಗ್, ಕಣ್ಣು ಮುಂದೆ ದೃಶ್ಯ ಇದ್ದೂ ನೆನಪಿಗಾಗಿ ಶೂಟಿಂಗ್, ಅರಣ್ಯ ಖಾತೆಯ ಚಿಕ್ಕಣ್ಣ , ಮೊಶಿನ್ ಗೋವಿಂದರೊಡನೆ ನಡೆದು ದಣಿದ ನಮಗೆ ಬೇಕಾಗಿತ್ತು ಓನ್ಲಿ ರೆಸ್ಟಿಂಗ್ !
prashanth_uc: ಒಡೆದ ಮಣ್ಣು , ಖಾಲಿ ಆಕಾಶ, ಒಣಗಿದ ಕೆರೆ ಕಂಡು ಬಾಯಾರಿ ನಿರಾಶ, ಹುಲಿಯ ಹೆಜ್ಜೆಯ ಕಂಡು, ಬಂತು ನಮ್ಮಲ್ಲಿ ಭಾವನೆ, ನಾವು ಹತೇಷ (survivor) !
prashanth_uc: UCP_1006
prashanth_uc: ಈ ಮರವೆನಾದರು ಮಾನವನಾದರೆ ಮಾಡುವ ಮೊದಲ ಕೆಲಸ ಯೆನೆಂದು ಬಲ್ಲಿರ ? ಹೋಗುವುದು ಅದು ಮೊದಲು ಬ್ಯೂಟಿ ಪಾರ್ಲರ, ಹಚ್ಚುವುದು ಒಡೆದ ಚರ್ಮಕ್ಕೆ ಬಾಡಿ ಲೋಷನ್ !
prashanth_uc: ಹುಲಿಯ ಉಗುರಿಗೆ ಕೋಣನ ಕೊಡಿಗೆ ಆಯಿತು ಅಂದು ಕಾಳಗ, ಸಣ್ಣ ಉಗುರದು ದೊಡ್ಡ ಕೋಡುಅದು ಹೊಟ್ಟೆ ಹರಿಯಿತು, ಹೊಟ್ಟೆ ತುಂಬಿತು ಮುಗಿಯಿತು ಆ ಕಾಳಗ !
prashanth_uc: ನಾನು ಚಿಕ್ಕವ ನೀನು ದೊಡ್ಡವ, ಆದರು ಹೆದರುವೆ ನನ್ನ ನೀನು, ನೀನು ಬೆಳ್ಳಗೆ ನಾನು ಕರ್ರಗೆ, ಆದರು ದೈರ್ಯದಲ್ಲಿ ನಾನು ಮೇಲು, ಚಿಕ್ಕ ದೊಡ್ಡ ಕಪ್ಪು ಬಿಳುಪು ಬರಿ ಓಳು ಬರಿ ಓಳು !
prashanth_uc: ಮಳೆ ಬರಲಿದೆ , ಮೋಡ ಕವಿದಿದೆ, ರವಿಯು ಇಣುಕಿ, ಬೆಳಕು ಚೆಲ್ಲಿದೆ, ಎಲೆಗಳು ಉದುರಿದೆ, ಹಸಿರು ಹಾಸಿದೆ, ಭೂಲೋಕ ಸ್ವರ್ಗದಂತೆ ಕಾಣಲು, ಗೋಪಾಲ ಸ್ವಾಮಿಯಾ ದರ್ಶನ ನಮ್ಮನು ಕಾದಿದೆ !
prashanth_uc: ದೇವರ ದರ್ಶನಕ್ಕೆ ಕಾರಿಂದ ಇಳಿಯಲು, ಕಾಣುತಿಹುದು ಬೆಟ್ಟದ ಮೇಲಿನ ಬಯಲು, ದೇವರೇ ಮುಂದೆ ಬಂದರು, ನೋಡುವೆವು ಇಲ್ಲಿ ಪ್ರಕೃತಿ ಸೌಂದರ್ಯ ಮೊದಲು !
prashanth_uc: ಯಾರು ನೀನು ಸುಂದರ ಚೆಲುವ ಎಲ್ಲಿಗೆ ಹೊರಟಿರುವೆ, ಹಸಿರು ಕೋಟು ಚಡ್ಡಿಯ ಧರಿಸಿ ತೋಪ್ಪಿಯ ಹಾಕಿರುವೆ, ಔಟ್ ಆಫ್ ಬೌಂಡ್ ಗಡಿಯನು ದಾಟಿ ಮುಂದಕೆ ಹೋಗಿರುವೆ, ಬಾ ನೀನು ಹಿಂದಕೆ ಬೇಗ ರೂಲ್ ಮುರಿದಿರುವೆ .
prashanth_uc: ಬರಿದಾದರೂ ನಾನ್ನ ಕೊಂಬೆ, ಪಾಚಿ ಹತ್ತಿದ್ದರೂ ನನ್ನ ತೊಗಟೆ, ಪೂಜಿಸುವರು ನನ್ನ ಜನ, ಇದು ನಾನು ಮರವೆಂದೋ ? ಅಥವಾ ದೇವಸ್ತಾನದ ಹೊರಗಿನ ಮರವೆಂದೋ ? ಈ ಜನರ ಮನವ ನಾ ಅರಿಯೆ !
prashanth_uc: ಎಡಕ್ಕೆ ಮರ ಬಲಕ್ಕೆ ಮರ, ತಲೆಯ ಮೇಲೆಯೂ ಮರ, ಮರವೇ ನಮ್ಮ ಆಧಾರ, ಇದ ಕಡಿದು ಆಗುವೆವೆ ಉದ್ದಾರ ?!!
prashanth_uc: ನನ್ನ ನೆಟ್ಟು , ನೀರು ಹಾಕಿ ಬಿದಿರು ಕಟ್ಟಿ , ಬೇಲಿ ಹಾಕಿ ನನ್ನ ಕೈಯ ಕೊಂಬೆ ರೆಂಬೆ ಕಡಿದು ಹಾಕಿ ನಿಮ್ಮ ಕೈಯ ಬಳೆಯ ಮಾಲೆ ಸುರಿದು ಹಾಕಿ ಇದು ಭಕ್ತಿ ? ಭಕ್ತಿ ? ಭಕ್ತಿ !!!
prashanth_uc: UCP_1196
prashanth_uc: ನಾನು ಇರುವೆ, ಒಮ್ಮೊಮ್ಮೆ ನಿಮ್ಮ ರಸ್ತೆ ಮೇಲೂ ನಡೆವೆ, ನಿಮ್ಮ ಕಾಲು, ಕಾರು ನನ್ನ ಜೀವ ತೆಗೆಯದಿರಲು, ಬದುಕಿ ಇನ್ನೊಂದು ದಿನ ನೋಡಲು ಉಳಿವೆ !
prashanth_uc: ರೋಡಿಗಾಗಿ ರೂಲ್ ಮಾಡಿ, ಗಾಡಿ ಇಲ್ಲಿ ನಿಲ್ಲಿಸ ಬೇಡಿ, ಬೇಡವೆಂದರೂ ಮನಸ್ಸು ನಮ್ಮ ಕಾಡಿ, ಇಲ್ಲಿ ನಿಂತ ನಮ್ಮ ಚಿತ್ರ ನೋಡಿ !
prashanth_uc: ಮೋಡದ ಕೊಡೆಯಲ್ಲಿ ಸಂದಿಯಾಯಿತು, ಕತ್ತಲಾಯಿತು ಮಳೆಯು ಬಂದಿತು, ನಿಂತ ನಮ್ಮನು ವದ್ದೆ ಮಾಡಿತು, ವಾಪಸ್ಸು ಮನೆಗೆ ತೆರಳಲು ಆಜ್ಞೆ ಆಯಿತು, ಬಂಡೀಪುರ ಟ್ರಿಪ್ಪು ಇಲ್ಲಿಗೆ ಮುಗಿಯಿತು !!!
prashanth_uc: ಕೋರ್ಸ್ ಮುಗಿಸಿ ಟ್ರೇನಿಂಗ ಪಡೆದು, ಸರ್ಟಿಫಿಕೇಟ್ ಇದ್ದರೇನು ಫಲ ? ಸ್ವಯಂಸೇವಕನಾಗಿ ಕೆಲಸವ ಮಾಡಲು, ಸಿಗಿವುದು ನಮ್ಮ ವನ್ಯ ಜೀವಕೆ ತುಂಬಾ ಬಲ !